ಪ್ರಿಯ ಯಕ್ಷಗಾನ ಸಾಹಿತ್ಯಾಭಿಮಾನಿಗಳೇ,
ಯಕ್ಷಮಟ್ಟುಕೋಶವೀಗ ನೂತನ ಸೇರ್ಪಡೆಯೊಂದಿಗೆ ನಿಮ್ಮ ಮುಂದಿದೆ. ಈ ಬಾರಿ ಸ್ರಗ್ಧರಾವೃತ್ತ, ತೋಡಿ ಆದಿ, ಮೋಹನ ಏಕ, ಬೇಗಡೆ ಆದಿ, ಗೌಳಸಾವೇರಿ ಅಷ್ಟ, ನಾದನಾಮಕ್ರಿಯೆ ಮಟ್ಟೆ ಎಂಬ ಆರು ಮಟ್ಟುಗಳು ಹಾಗೂ ಹಿಂದೆ ಇದ್ದ ಭೈರವಿ ತ್ರಿವುಡೆ ಮಟ್ಟಿಗೆ ಒಂದು ಪ್ರಭೇದ ಸೇರ್ಪಡೆಗೊಂಡಿದ್ದು, ಸೂಕ್ಷ್ಮವಾದ ಅಧ್ಯಯನದ ಮೂಲಕ ಮೊದಲು ನಿಮ್ಮ ಮುಂದಿಟ್ಟಿದ್ದ ಮುಖಾರಿ ತ್ರಿವುಡೆ ಹಾಗೂ ವೃಂದಾವನ ಬೇಗಡೆ ತ್ರಿವುಡೆ ಎನ್ನುವ ಎರಡು ಮಟ್ಟುಗಳು ಕ್ರಮವಾಗಿ ಭೈರವಿ ತ್ರಿವುಡೆ ಹಾಗೂ ಬೇಗಡೆ ತ್ರಿವುಡೆಗಳೇ ಆದ್ದರಿಂದ ಎರಡು ಮಟ್ಟುಗಳನ್ನು ಬಿಟ್ಟಿದ್ದೇವೆ.
ನಿರಂತರ ಅಧ್ಯಯನದ ಮೂಲಕವೇ ಸಾಧಿಸಬೇಕಾದ ಈ ಕಾರ್ಯದಲ್ಲಿ ಈ ರೀತಿಯ ಗೊಂದಲ ಸಹಜ.ಸಹೃದಯರಾದ ತಾವುಗಳು ನಮ್ಮೀ ಪರಿಶ್ರಮವನ್ನು ಗುರುತಿಸಿ,ಸಹಕರಿಸಿ ಪ್ರೋತ್ಸಾಹಿಸುವಿರಾಗಿ ವಿಶ್ವಾಸವಿದೆ.
ಕ್ರಮ ಸಂಖ್ಯೆ | ಅನನ್ಯ ಸಂಖ್ಯೆ | ಮಟ್ಟಿನ ಹೆಸರು | ಮಟ್ಟಿನ ವಿವರದ ದಸ್ತಾವೇಜಿನ ಕೊಂಡಿ | ದಸ್ತಾವೇಜನ್ನು ಸೇರಿಸಿದ ದಿನಾಂಕ | ಟಿಪ್ಪಣಿ |
8 | YMK122 | ಸ್ರಗ್ಧರಾ ವೃತ್ತ | https://drive.google.com/file/d/1o3TO0kI_pkiK-n24KMS-OwyWz4Os0Gak/view?usp=sharing | ೧೦ ಜನವರಿ ೨೦೨೨ |
|
15 | YMK008 | ಭೈರವಿ - ತ್ರಿವುಡೆ | https://drive.google.com/open?id=1pasUrY_O7kWbo6zDIfOdmE0ZuPfX6mUh | ೧೦ ಜನವರಿ ೨೦೨೨ | |
74 | YMK120 | ಮೋಹನ - ಏಕ | https://drive.google.com/file/d/1sjzluqiFQZP5xVnIB627fYEJ0NH490c_/view?usp=sharing | ೧೦ ಜನವರಿ ೨೦೨೨ |
|
114 | YMK124 | ನಾದನಾಮಕ್ರಿಯೆ - ಮಟ್ಟೆ (ರೂಪಕ) | https://drive.google.com/file/d/1Y4kvs7cI575aF1mt1856j95VG6U8RiNh/view?usp=sharing | ೧೦ ಜನವರಿ ೨೦೨೨ | |
125 | YMK119 | ತೋಡಿ - ಆದಿ | https://drive.google.com/file/d/1clUhbaJUiVp5OFqW2Wss92fBd-AHq4e6/view?usp=sharing | ೧೦ ಜನವರಿ ೨೦೨೨ | ಪ್ರಭೇದ - ೧ |
126 | YMK121 | ಬೇಗಡೆ - ಆದಿ | https://drive.google.com/file/d/1eZJ0XIFmydQt1uC7EOp8aodY0pf_lx4q/view?usp=sharing | ೧೦ ಜನವರಿ ೨೦೨೨ | |
139 | YMK123 | ಗೌಳಸಾವೇರಿ - ಅಷ್ಟ | https://drive.google.com/file/d/1aymngJ-tcJ61tXBBjM4QqBuOqahXrq78/view?usp=sharing | ೧೦ ಜನವರಿ ೨೦೨೨ |
|
ಇದುವರೆಗಿನ ಮಟ್ಟುಕೋಶದಲ್ಲಿನ ಸಂಪೂರ್ಣ ವಿವರಗಳಿಗಾಗಿ ಕೆಳಗಿನ ಕೊಂಡಿಯನ್ನು ನೋಡಿ;
ಒಂದೊಂದೇ ಮಟ್ಟಿನ ವಿವರವಾದ ಮಾಹಿತಿಯನ್ನು ತಿಳಿಯುವ ಮುನ್ನ, ಮಟ್ಟುಗಳ ಮತ್ತು ಯಕ್ಷಗಾನ ಛಂದಸ್ಸಿನ ನಡುವಿನ ನಂಟನ್ನು ಪೂರ್ವಭಾವಿಯಾಗಿ ಅರಿಯುವುದು ಅನಿವಾರ್ಯ. ಆದುದರಿಂದಲೇ ಪರಿಚಯಾತ್ಮಕವಾದ “ಮಟ್ಟಿನ ಸೌಧಕ್ಕೆ ಮೆಟ್ಟಿಲು” ಎಂಬ ಲೇಖನವನ್ನು ದಯವಿಟ್ಟು ಮೊದಲು ಓದಿ (ಕೊಂಡಿಯನ್ನು ಕೆಳಗೆ ಕೊಡಲಾಗಿದೆ). ಈ ಲೇಖನವನ್ನು ಪ್ರತೀ ಮಟ್ಟಿನ ವಿವರವಾದ ಮಾಹಿತಿ ದಸ್ತಾವೇಜಿನಲ್ಲೂ, ಮಟ್ಟುಗಳ ಕೋಷ್ಟಕದಲ್ಲೂ ಕೊಂಡಿಯ ಮೂಲಕ ಸುಲಭದಲ್ಲಿ ಓದಲು ಸಿಗುವಂತೆ ಕೊಟ್ಟಿದ್ದೇವೆ.
ಈ ಯೋಜನೆಯಲ್ಲಿ ನೀವೂ ಕೂಡ ನಮಗೆ ಸಹಾಯ ಮಾಡಬಹುದು.. ನಿಮಗೆ ವಿಶೇಷವೆನಿಸಿದ ಮಟ್ಟಿನ ಹೆಸರು, ದೃಷ್ಟಾಂತ, ಪ್ರಸಂಗದ ಹೆಸರು ಮತ್ತಿತರೆ ಪೂರ್ಣ ವಿವರಗಳೊಂದಿಗೆ ನಮಗೆ ವಾಟ್ಸಾಪ್ ಅಥವಾ ಈ ಮೈಲ್ ಮೂಲಕ ಕಳಿಸಬಹುದು. ನಮ್ಮ ತಂಡದ ಪರಿಶೀಲನೆಯ ನಂತರ ಅದನ್ನು ಮಟ್ಟುಕೋಶಕ್ಕೆ ಸೇರಿಸಲಾಗುತ್ತದೆ. ನಿಮ್ಮ ಸಹಕಾರ, ಸಹಾಯ ಮತ್ತು ಪ್ರೋತ್ಸಾಹ ಸದಾ ಇರಲಿ.
ಹಾಗೆಯೇ ಮಟ್ಟುಕೋಶದಲ್ಲಿನ ಮಟ್ಟುಗಳಿಗೆ ಸಂಬಂಧಿಸಿದ ನಿಮ್ಮ ಸಂದೇಹ / ಗೊಂದಲಗಳನ್ನು ಕೆಳಗಿನ ಈ-ಮೈಲ್ ವಿಳಾಸಕ್ಕೆ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ವಿಳಾಸದೊಂದಿಗೆ ಕಳುಹಿಸಿದಲ್ಲಿ ಸೂಕ್ತ ಸಮಯದಲ್ಲಿ ಸಂದೇಹ/ಗೊಂದಲಗಳನ್ನು ಪರಿಹರಿಸುವುದಕ್ಕೆ ಪ್ರಯತ್ನಿಸುತ್ತೇವೆ.
ಈ ಮೈಲ್ ವಿಳಾಸ : yakshamattukosha@gmail.com
ವಾಟ್ಸಾಪ್ ಸಂಖ್ಯೆ : +91 9686112237 / +91 94496 86807
ಧನ್ಯವಾದಗಳೊಂದಿಗೆ,
ಶ್ರೀ ಶ್ರೀಧರ ಡಿ. ಎಸ್., ಪ್ರಧಾನ ನಿರ್ದೇಶಕರು
ಶ್ರೀ ಗಿಂಡೀಮನೆ ಮೃತ್ಯುಂಜಯ, ಸಹ ನಿರ್ದೇಶಕರು
ಶ್ರೀ ಅನಂತ ಪದ್ಮನಾಭ ಫಾಟಕ್, ಸಹ ನಿರ್ದೇಶಕರು
ಶ್ರೀ ಅಜಿತ್ ಕಾರಂತ್, ಪ್ರಧಾನ ಸಂಪಾದಕರು
ಡಾ. ಆನಂದರಾಮ ಉಪಾಧ್ಯ, ಶ್ರೀ ನಟರಾಜ ಉಪಾಧ್ಯ, ಶ್ರೀ ರವಿ ಮಡೋಡಿ (ವಿಶ್ವಸ್ಥರು, ಯಕ್ಷವಾಹಿನಿ ಸಂಸ್ಥೆ)
No comments:
Post a Comment