Monday, May 25, 2020

ಯಕ್ಷಮಟ್ಟುಕೋಶಕ್ಕೆ ಮೂರನೇ ಹಂತದಲ್ಲಿ ೧೨ ಮಟ್ಟುಗಳ ಸೇರ್ಪಡೆ!


ಸಹೃದಯಿ ಯಕ್ಷಬಾಂಧವರೇ,


ಯಕ್ಷಮಟ್ಟುಕೋಶಕ್ಕೆ ಇಂದು ಮತ್ತೆ ೧೨ ಹೊಸ ಮಟ್ಟುಗಳ ವಿವರ ಸೇರ್ಪಡೆಯಾಗುತ್ತಿದೆ. ಅಲ್ಲಿಗೆ ಯಕ್ಷಮಟ್ಟುಕೋಶದಲ್ಲಿರುವ ಒಟ್ಟು ಮಟ್ಟುಗಳ ಸಂಖ್ಯೆ ೩೪ಕ್ಕೆ ಏರಿದೆ. ಈ ಯೋಜನೆಯಲ್ಲಿ ನಾವು ಹಲವಾರು ಪ್ರಸಂಗಗಳನ್ನು ಪರಿಶೀಲಿಸುತ್ತಿದ್ದು ವಿಭಿನ್ನ ಛಂದೋಲಕ್ಷಣಗಳನ್ನು ಹೊಂದಿದ ಪದ್ಯಗಳನ್ನು ಕಂಡುಕೊಳ್ಳುತ್ತಿದ್ದೇವೆ. ಈ ನಿಟ್ಟಿನಲ್ಲಿ ಬೇರೆ ಬೇರೆ ಕವಿಗಳ ಕೃತಿಗಳು ಮತ್ತು ರಚನೆಗಳ ಕುರಿತಾಗಿ ಹೊಸ ಆಯಾಮಗಳೊಂದಿಗೆ ಮಟ್ಟುಕೋಶಕ್ಕೆ ಮತ್ತಷ್ಟು ಪೂರಕ ಮಾಹಿತಿ ಒದಗಿಸುವ ಉದ್ದೇಶ ನಮ್ಮದುಮಟ್ಟುಗಳ ವಿವರಗಳನ್ನು ಬೇರೆ ಬೇರೆ ದಸ್ತಾವೇಜುಗಳಲ್ಲಿ ಬರೆದು, ಕೊಂಡಿಗಳ ಮೂಲಕ ಯಕ್ಷಮಟ್ಟುಕೋಶದ ಕೋಷ್ಟಕದಲ್ಲಿ ಕೊಡಲಾಗಿದೆ. ಕೋಷ್ಟಕಕ್ಕಾಗಿ ಈ ಕೆಳಗಿನ ಕೊಂಡಿಯನ್ನು ಒತ್ತಿ.


 ಒಂದೊಂದೇ ಮಟ್ಟಿನ ವಿವರವಾದ ಮಾಹಿತಿಯನ್ನು ತಿಳಿಯುವ ಮುನ್ನ, ಮಟ್ಟುಗಳ ಮತ್ತು ಯಕ್ಷಗಾನ ಛಂದಸ್ಸಿನ ನಡುವಿನ ನಂಟನ್ನು ಪೂರ್ವಭಾವಿಯಾಗಿ ಅರಿಯುವುದು ಅನಿವಾರ್ಯ. ಆದುದರಿಂದಲೇ ಪರಿಚಯಾತ್ಮಕವಾದ “ಮಟ್ಟಿನ ಸೌಧಕ್ಕೆ ಮೆಟ್ಟಿಲು” ಎಂಬ ಲೇಖನವನ್ನು ದಯವಿಟ್ಟು ಮೊದಲು ಓದಿ (ಕೊಂಡಿಯನ್ನು ಕೆಳಗೆ ಕೊಡಲಾಗಿದೆ). ಈ ಲೇಖನವನ್ನು ಪ್ರತೀ ಮಟ್ಟಿನ ವಿವರವಾದ ಮಾಹಿತಿ ದಸ್ತಾವೇಜಿನಲ್ಲೂ, ಮಟ್ಟುಗಳ ಕೋಷ್ಟಕದಲ್ಲೂ ಕೊಂಡಿಯ ಮೂಲಕ ಸುಲಭದಲ್ಲಿ  ಓದಲು ಸಿಗುವಂತೆ ಕೊಟ್ಟಿದ್ದೇವೆ.



ಈ ಯೋಜನೆಯಲ್ಲಿ ನೀವೂ ಕೂಡ ನಮಗೆ ಸಹಾಯ ಮಾಡಬಹುದು.. ನಿಮಗೆ ವಿಶೇಷವೆನಿಸಿದ ಮಟ್ಟಿನ ಹೆಸರು, ದೃಷ್ಟಾಂತ, ಪ್ರಸಂಗದ ಹೆಸರು ಮತ್ತಿತರೆ ಪೂರ್ಣ ವಿವರಗಳೊಂದಿಗೆ ನಮಗೆ ವಾಟ್ಸಾಪ್‌ ಅಥವಾ ಈ ಮೈಲ್‌ ಮೂಲಕ ಕಳಿಸಬಹುದು. ನಮ್ಮ ತಂಡದ ಪರಿಶೀಲನೆಯ ನಂತರ ಅದನ್ನು ಮಟ್ಟುಕೋಶಕ್ಕೆ ಸೇರಿಸಲಾಗುತ್ತದೆ. ನಿಮ್ಮ ಸಹಕಾರ, ಸಹಾಯ ಮತ್ತು ಪ್ರೋತ್ಸಾಹ ಸದಾ ಇರಲಿ.

ಹಾಗೆಯೇ ಮಟ್ಟುಕೋಶದಲ್ಲಿನ ಮಟ್ಟುಗಳಿಗೆ ಸಂಬಂಧಿಸಿದ ನಿಮ್ಮ ಸಂದೇಹ / ಗೊಂದಲಗಳನ್ನು ಕೆಳಗಿನ ಈ-ಮೈಲ್‌ ವಿಳಾಸಕ್ಕೆ ನಿಮ್ಮ ಹೆಸರು, ಮೊಬೈಲ್‌ ಸಂಖ್ಯೆ ಮತ್ತು ವಿಳಾಸದೊಂದಿಗೆ ಕಳುಹಿಸಿದಲ್ಲಿ ಸೂಕ್ತ ಸಮಯದಲ್ಲಿ ಸಂದೇಹ/ಗೊಂದಲಗಳನ್ನು ಪರಿಹರಿಸುವುದಕ್ಕೆ ಪ್ರಯತ್ನಿಸುತ್ತೇವೆ.

ಈ ಮೈಲ್‌ ವಿಳಾಸ : yakshamattukosha@gmail.com
ವಾಟ್ಸಾಪ್‌ ಸಂಖ್ಯೆ : +91 9686112237 / +91 94496 86807

ಧನ್ಯವಾದಗಳೊಂದಿಗೆ,
ಶ್ರೀ ಶ್ರೀಧರ ಡಿ. ಎಸ್., ಪ್ರಧಾನ ನಿರ್ದೇಶಕರು
ಶ್ರೀ ಗಿಂಡೀಮನೆ ಮೃತ್ಯುಂಜಯ, ಸಹ ನಿರ್ದೇಶಕರು
ಶ್ರೀ ಅನಂತ ಪದ್ಮನಾಭ ಫಾಟಕ್‌, ಸಹ ನಿರ್ದೇಶಕರು
ಶ್ರೀ ಅಜಿತ್‌ ಕಾರಂತ್‌, ಪ್ರಧಾನ ಸಂಪಾದಕರು
ಶ್ರೀಮತಿ ಅಶ್ವಿನಿ ಹೊದಲ, ಸಹ ಸಂಪಾದಕರು
ಡಾ. ಆನಂದರಾಮ ಉಪಾಧ್ಯ, ಶ್ರೀ ನಟರಾಜ ಉಪಾಧ್ಯ, ಶ್ರೀ ರವಿ  ಮಡೋಡಿ (ವಿಶ್ವಸ್ಥರು, ಯಕ್ಷವಾಹಿನಿ ಸಂಸ್ಥೆ)