ಪ್ರಿಯ ಯಕ್ಷಬಂಧುಗಳೇ,
ಯಕ್ಷಮಟ್ಟುಕೋಶಕ್ಕೆ ಮತ್ತಷ್ಟು ಹಳೆಯಮಟ್ಟುಗಳು ಹೊಸದಾಗಿ ಸೇರ್ಪಡೆಯಾಗಿದೆ. ಈ ಕಂತಿನಲ್ಲಿ ಬಿಡುಗಡೆಗೊಂಡ ೧೭ ಮಟ್ಟುಗಳನ್ನೂ ಸೇರಿ ಕೋಶದಲ್ಲಿನ ಒಟ್ಟು ಮಟ್ಟುಗಳ ಸಂಖ್ಯೆ ೮೧ಕ್ಕೆ ಏರಿದೆ (ಪ್ರಭೇದಗಳೂ ಸೇರಿ). ಬಹಳ ಹಳೆಯ ಪ್ರಸಂಗಗಳು ನಮ್ಮ ಸಂಗ್ರಹ ಸೇರುತ್ತಿದ್ದಂತೆ ಮಟ್ಟುಗಳ ಸಂಶೋಧನೆಗಳ ಸುತ್ತಲಿನ ನಮ್ಮ ಕೆಲಸ ಮತ್ತಷ್ಟು ಹುರುಪಿನಿಂದ ಸಾಗುತ್ತಿದೆ. ಈ ಬಾರಿ ನಾಮನಾರಾಯಣಿ – ತ್ರಿವುಡೆ, ಮಾರವಿ – ತ್ರಿವುಡೆ ಹಾಗೂ ರೇಗುಪ್ತಿ - ತ್ರಿವುಡೆಯಂಥಹಾ ವಿಶಿಷ್ಟ ಮತ್ತು ವಿರಳವಾಗಿ ಉಪಯೋಗಿಸಲ್ಪಟ್ಟ ಮಟ್ಟುಗಳನ್ನು ಪರಿಚಯಿಸಲಾಗಿದೆ. ಈ ಮಟ್ಟುಗಳು ಯಕ್ಷಕವಿಗಳ ಸಾಹಿತ್ಯದ ಕೌಶಲ ಮತ್ತು ಸೊಬಗಿಗೆ ಹಿಡಿದ ಕನ್ನಡಿಯಾಗಿದೆ. ಈ ಮಟ್ಟುಗಳ ಲಕ್ಷಣಗಳು ವಿಶೇಷ ಮತ್ತು ಸುಂದರವಾಗಿದ್ದು, ಮುಂಬರುವ ಪ್ರಸಂಗ ರಚನೆಗಳಲ್ಲಿ ಉಪಯೋಗಿಸಲು ಸಹಕಾರಿಯಾಗಿದೆ.
ಇಂಥಹಾ ಹಲವಾರು ಮಟ್ಟುಗಳನ್ನು ಗುರುತಿಸಿ, ಸಾಹಿತ್ಯಾಸಕ್ತರಿಗೆ ಪರಿಚಯಿಸುವ ಈ ಕಾರ್ಯದಲ್ಲಿ ನಮಗೆ ಇನ್ನೂ ವಿಶೇಷ ರಚನೆಗಳು ಸಿಕ್ಕಿದ್ದು ಮುಂಬರುವ ದಿನಗಳಲ್ಲಿ ಅವುಗಳ ವಿವರಗಳನ್ನು ನಮ್ಮಿಂದ ನಿರೀಕ್ಷಿಸಿ.
ಇಂದು ಮಟ್ಟುಕೋಶಕ್ಕೆ ಸೇರ್ಪಡೆಯಾಗುತ್ತಿರುವ ಮಟ್ಟಿನ ವಿವರಗಳು ಕೆಳಕಂಡಂತಿದೆ:
ಕ್ರಮ ಸಂಖ್ಯೆ
|
ಅನನ್ಯ ಸಂಖ್ಯೆ
|
ಮಟ್ಟಿನ ಹೆಸರು
|
ಮಟ್ಟಿನ ವಿವರದ ದಸ್ತಾವೇಜಿನ
ಕೊಂಡಿ
|
ಟಿಪ್ಪಣಿ
|
5
|
YMK052
|
ಕಾಪಿ - ತ್ರಿವುಡೆ
|
||
6
|
YMK053
|
ನಾಮನಾರಾಯಣಿ - ತ್ರಿವುಡೆ
|
||
12
|
YMK051
|
ಮಾರವಿ - ತ್ರಿವುಡೆ
|
||
17
|
YMK057
|
ರೇಗುಪ್ತಿ - ತ್ರಿವುಡೆ
|
||
24
|
YMK050
|
ಅಹೇರಿ - ಏಕ
|
||
38
|
YMK056
|
ಜಂಜೂಟಿ - ಏಕ
|
ಪ್ರಭೇದ - ೧
|
|
39
|
YMK056
|
ಜಂಜೂಟಿ - ಏಕ
|
ಪ್ರಭೇದ - ೨
|
|
40
|
YMK056
|
ಜಂಜೂಟಿ - ಏಕ
|
ಪ್ರಭೇದ - ೩
|
|
41
|
YMK056
|
ಜಂಜೂಟಿ - ಏಕ
|
ಪ್ರಭೇದ - ೪
|
|
44
|
YMK058
|
ಧವಳಾರ - ಏಕ
|
||
48
|
YMK055
|
ನೀಲಾಂಬರಿ - ಏಕ
|
ಪ್ರಭೇದ - ೨
|
|
49
|
YMK055
|
ನೀಲಾಂಬರಿ - ಏಕ
|
ಪ್ರಭೇದ - ೩
|
|
50
|
YMK055
|
ನೀಲಾಂಬರಿ - ಏಕ
|
ಪ್ರಭೇದ - ೪
|
|
52
|
YMK049
|
ಭೂಪಾಳಿ - ಏಕ
|
||
78
|
YMK047
|
ನೀಲಾಂಬರಿ - ಝಂಪೆ
|
ಪ್ರಭೇದ - ೨
|
|
79
|
YMK054
|
ನೀಲಾಂಬರಿ - ಝಂಪೆ
|
ಪ್ರಭೇದ - ೩
|
|
81
|
YMK059
|
ಸಾಂಗತ್ಯ - ರೂಪಕ
|
ಇದುವರೆಗಿನ
ಮಟ್ಟುಕೋಶದಲ್ಲಿನ ಸಂಪೂರ್ಣ ವಿವರಗಳಿಗಾಗಿ ಕೆಳಗಿನ ಕೊಂಡಿಯನ್ನು ನೋಡಿ;
ಯಕ್ಷಮಟ್ಟುಕೋಶದ ಕೋಷ್ಟಕ
ಒಂದೊಂದೇ ಮಟ್ಟಿನ ವಿವರವಾದ ಮಾಹಿತಿಯನ್ನು ತಿಳಿಯುವ ಮುನ್ನ, ಮಟ್ಟುಗಳ ಮತ್ತು ಯಕ್ಷಗಾನ ಛಂದಸ್ಸಿನ ನಡುವಿನ ನಂಟನ್ನು ಪೂರ್ವಭಾವಿಯಾಗಿ ಅರಿಯುವುದು ಅನಿವಾರ್ಯ. ಆದುದರಿಂದಲೇ ಪರಿಚಯಾತ್ಮಕವಾದ “ಮಟ್ಟಿನ ಸೌಧಕ್ಕೆ ಮೆಟ್ಟಿಲು” ಎಂಬ ಲೇಖನವನ್ನು ದಯವಿಟ್ಟು ಮೊದಲು ಓದಿ (ಕೊಂಡಿಯನ್ನು ಕೆಳಗೆ ಕೊಡಲಾಗಿದೆ). ಈ ಲೇಖನವನ್ನು ಪ್ರತೀ ಮಟ್ಟಿನ ವಿವರವಾದ ಮಾಹಿತಿ ದಸ್ತಾವೇಜಿನಲ್ಲೂ, ಮಟ್ಟುಗಳ ಕೋಷ್ಟಕದಲ್ಲೂ ಕೊಂಡಿಯ ಮೂಲಕ ಸುಲಭದಲ್ಲಿ ಓದಲು ಸಿಗುವಂತೆ ಕೊಟ್ಟಿದ್ದೇವೆ.
ಮಟ್ಟಿನ ಸೌಧಕ್ಕೆ ಮೆಟ್ಟಿಲು
ಈ ಯೋಜನೆಯಲ್ಲಿ ನೀವೂ ಕೂಡ ನಮಗೆ ಸಹಾಯ ಮಾಡಬಹುದು.. ನಿಮಗೆ ವಿಶೇಷವೆನಿಸಿದ ಮಟ್ಟಿನ ಹೆಸರು, ದೃಷ್ಟಾಂತ, ಪ್ರಸಂಗದ ಹೆಸರು ಮತ್ತಿತರೆ ಪೂರ್ಣ ವಿವರಗಳೊಂದಿಗೆ ನಮಗೆ ವಾಟ್ಸಾಪ್ ಅಥವಾ ಈ ಮೈಲ್ ಮೂಲಕ ಕಳಿಸಬಹುದು. ನಮ್ಮ ತಂಡದ ಪರಿಶೀಲನೆಯ ನಂತರ ಅದನ್ನು ಮಟ್ಟುಕೋಶಕ್ಕೆ ಸೇರಿಸಲಾಗುತ್ತದೆ. ನಿಮ್ಮ ಸಹಕಾರ, ಸಹಾಯ ಮತ್ತು ಪ್ರೋತ್ಸಾಹ ಸದಾ ಇರಲಿ.
ಹಾಗೆಯೇ ಮಟ್ಟುಕೋಶದಲ್ಲಿನ ಮಟ್ಟುಗಳಿಗೆ ಸಂಬಂಧಿಸಿದ ನಿಮ್ಮ ಸಂದೇಹ
/ ಗೊಂದಲಗಳನ್ನು ಕೆಳಗಿನ ಈ-ಮೈಲ್ ವಿಳಾಸಕ್ಕೆ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ವಿಳಾಸದೊಂದಿಗೆ ಕಳುಹಿಸಿದಲ್ಲಿ ಸೂಕ್ತ
ಸಮಯದಲ್ಲಿ ಸಂದೇಹ/ಗೊಂದಲಗಳನ್ನು ಪರಿಹರಿಸುವುದಕ್ಕೆ ಪ್ರಯತ್ನಿಸುತ್ತೇವೆ.
ಈ ಮೈಲ್ ವಿಳಾಸ : yakshamattukosha@gmail.com
ವಾಟ್ಸಾಪ್ ಸಂಖ್ಯೆ : +91 9686112237 / +91 94496 86807
ಧನ್ಯವಾದಗಳೊಂದಿಗೆ,
ಶ್ರೀ ಶ್ರೀಧರ ಡಿ. ಎಸ್., ಪ್ರಧಾನ ನಿರ್ದೇಶಕರು
ಶ್ರೀ ಗಿಂಡೀಮನೆ ಮೃತ್ಯುಂಜಯ, ಸಹ ನಿರ್ದೇಶಕರು
ಶ್ರೀ ಅನಂತ ಪದ್ಮನಾಭ ಫಾಟಕ್, ಸಹ ನಿರ್ದೇಶಕರು
ಶ್ರೀ ಅಜಿತ್ ಕಾರಂತ್, ಪ್ರಧಾನ ಸಂಪಾದಕರು
ಶ್ರೀಮತಿ ಅಶ್ವಿನಿ ಹೊದಲ, ಸಹ ಸಂಪಾದಕರು
ಡಾ. ಆನಂದರಾಮ ಉಪಾಧ್ಯ, ಶ್ರೀ ನಟರಾಜ ಉಪಾಧ್ಯ, ಶ್ರೀ ರವಿ ಮಡೋಡಿ (ವಿಶ್ವಸ್ಥರು, ಯಕ್ಷವಾಹಿನಿ ಸಂಸ್ಥೆ)