ಯಕ್ಷಮಟ್ಟುಕೋಶಕ್ಕೆ ಮತ್ತೊಮ್ಮೆ ೧೭ ಮಟ್ಟುಗಳ ಸೇರ್ಪಡೆಯಾಗಿ ಈವರೆಗೆ ಸಂಗ್ರಹ ಸೇರಿದ ಒಟ್ಟು ಮಟ್ಟುಗಳ ಸಂಖ್ಯೆ ೧೨೮ ಆಗಿದೆ. ಮೊಗೆದಷ್ಟು ಬೊಗಸೆಯಲ್ಲಿ ತುಂಬಿಕೊಳ್ಳುವ ಯಕ್ಷಸಾಹಿತ್ಯದಲ್ಲಿ ಬಳಕೆಯಾದ ಬಹಳಷ್ಟು ವಿಶೇಷ ಮಟ್ಟುಗಳ ಮೇಲೆ ಬೆಳಕು ಚೆಲ್ಲುವ ಅಪೂರ್ವ ಕಾರ್ಯ ತಡೆಯಿಲ್ಲದಂತೆ ಸಾಗಿದೆ.
ಇಂದು ಮಟ್ಟುಕೋಶಕ್ಕೆ ಸೇರ್ಪಡೆಯಾಗುತ್ತಿರುವ ಮಟ್ಟಿನ ವಿವರಗಳು ಕೆಳಕಂಡಂತಿದೆ:
ಇದುವರೆಗಿನ ಮಟ್ಟುಕೋಶದಲ್ಲಿನ ಸಂಪೂರ್ಣ ವಿವರಗಳಿಗಾಗಿ ಕೆಳಗಿನ ಕೊಂಡಿಯನ್ನು ನೋಡಿ;
ಒಂದೊಂದೇ ಮಟ್ಟಿನ ವಿವರವಾದ ಮಾಹಿತಿಯನ್ನು ತಿಳಿಯುವ ಮುನ್ನ, ಮಟ್ಟುಗಳ ಮತ್ತು ಯಕ್ಷಗಾನ ಛಂದಸ್ಸಿನ ನಡುವಿನ ನಂಟನ್ನು ಪೂರ್ವಭಾವಿಯಾಗಿ ಅರಿಯುವುದು ಅನಿವಾರ್ಯ. ಆದುದರಿಂದಲೇ ಪರಿಚಯಾತ್ಮಕವಾದ “ಮಟ್ಟಿನ ಸೌಧಕ್ಕೆ ಮೆಟ್ಟಿಲು” ಎಂಬ ಲೇಖನವನ್ನು ದಯವಿಟ್ಟು ಮೊದಲು ಓದಿ (ಕೊಂಡಿಯನ್ನು ಕೆಳಗೆ ಕೊಡಲಾಗಿದೆ). ಈ ಲೇಖನವನ್ನು ಪ್ರತೀ ಮಟ್ಟಿನ ವಿವರವಾದ ಮಾಹಿತಿ ದಸ್ತಾವೇಜಿನಲ್ಲೂ, ಮಟ್ಟುಗಳ ಕೋಷ್ಟಕದಲ್ಲೂ ಕೊಂಡಿಯ ಮೂಲಕ ಸುಲಭದಲ್ಲಿ ಓದಲು ಸಿಗುವಂತೆ ಕೊಟ್ಟಿದ್ದೇವೆ.
ಈ ಯೋಜನೆಯಲ್ಲಿ ನೀವೂ ಕೂಡ ನಮಗೆ ಸಹಾಯ ಮಾಡಬಹುದು.. ನಿಮಗೆ ವಿಶೇಷವೆನಿಸಿದ ಮಟ್ಟಿನ ಹೆಸರು, ದೃಷ್ಟಾಂತ, ಪ್ರಸಂಗದ ಹೆಸರು ಮತ್ತಿತರೆ ಪೂರ್ಣ ವಿವರಗಳೊಂದಿಗೆ ನಮಗೆ ವಾಟ್ಸಾಪ್ ಅಥವಾ ಈ ಮೈಲ್ ಮೂಲಕ ಕಳಿಸಬಹುದು. ನಮ್ಮ ತಂಡದ ಪರಿಶೀಲನೆಯ ನಂತರ ಅದನ್ನು ಮಟ್ಟುಕೋಶಕ್ಕೆ ಸೇರಿಸಲಾಗುತ್ತದೆ. ನಿಮ್ಮ ಸಹಕಾರ, ಸಹಾಯ ಮತ್ತು ಪ್ರೋತ್ಸಾಹ ಸದಾ ಇರಲಿ.
ಹಾಗೆಯೇ ಮಟ್ಟುಕೋಶದಲ್ಲಿನ ಮಟ್ಟುಗಳಿಗೆ ಸಂಬಂಧಿಸಿದ ನಿಮ್ಮ ಸಂದೇಹ / ಗೊಂದಲಗಳನ್ನು ಕೆಳಗಿನ ಈ-ಮೈಲ್ ವಿಳಾಸಕ್ಕೆ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ವಿಳಾಸದೊಂದಿಗೆ ಕಳುಹಿಸಿದಲ್ಲಿ ಸೂಕ್ತ ಸಮಯದಲ್ಲಿ ಸಂದೇಹ/ಗೊಂದಲಗಳನ್ನು ಪರಿಹರಿಸುವುದಕ್ಕೆ ಪ್ರಯತ್ನಿಸುತ್ತೇವೆ.
ಈ ಮೈಲ್ ವಿಳಾಸ : yakshamattukosha@gmail.com
ವಾಟ್ಸಾಪ್ ಸಂಖ್ಯೆ : +91 9686112237 / +91 94496 86807
ಧನ್ಯವಾದಗಳೊಂದಿಗೆ,
ಶ್ರೀ ಶ್ರೀಧರ ಡಿ. ಎಸ್., ಪ್ರಧಾನ ನಿರ್ದೇಶಕರು
ಶ್ರೀ ಗಿಂಡೀಮನೆ ಮೃತ್ಯುಂಜಯ, ಸಹ ನಿರ್ದೇಶಕರು
ಶ್ರೀ ಅನಂತ ಪದ್ಮನಾಭ ಫಾಟಕ್, ಸಹ ನಿರ್ದೇಶಕರು
ಶ್ರೀ ಅಜಿತ್ ಕಾರಂತ್, ಪ್ರಧಾನ ಸಂಪಾದಕರು
ಶ್ರೀಮತಿ ಅಶ್ವಿನಿ ಹೊದಲ, ಸಹ ಸಂಪಾದಕರು
ಡಾ. ಆನಂದರಾಮ ಉಪಾಧ್ಯ, ಶ್ರೀ ನಟರಾಜ ಉಪಾಧ್ಯ, ಶ್ರೀ ರವಿ ಮಡೋಡಿ (ವಿಶ್ವಸ್ಥರು, ಯಕ್ಷವಾಹಿನಿ ಸಂಸ್ಥೆ)
ಅದ್ವಿತೀಯ ಪ್ರಯತ್ನ. ನನ್ನ ಸದಾಶಯ ನಿಮ್ಮ ಜೊತೆ ಯಾವತ್ತೂ ಇರುವುದು.ಅಭಿನಂದನೆಗಳು.
ReplyDeleteಹೃತ್ಪೂರ್ವಕ ಧನ್ಯವಾದಗಳು.
DeleteCasino Review (2021) - Mapyro
ReplyDeleteCasino 경상북도 출장안마 Review 2021. Learn more about the games, promotions, and 정읍 출장마사지 games offered by 사천 출장샵 Casino.Casino Promotion: 용인 출장샵 100% 인천광역 출장샵 up to $1,000